ಧ್ಯೇಯ : 

  • ವಿದ್ಯಾರ್ಥಿಗಳ ದೈಹಿಕ, ಮಾನಸಿಕ, ನೈತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಅಭಿವೃದ್ಧಿಪಡಿಸುವುದು. 
  • ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದವರನ್ನುಉನ್ನತೀಕರಿಸುವುದು. 
  • ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದು. 

* * * * * * * * * 

ದೃಷ್ಟಿಕೋನ : 

  • ಜಾತಿ ಮತ್ತು ಧರ್ಮದ ಭೇದವಿಲ್ಲದೆಯೇ ಶಿಕ್ಷಣ ಮತ್ತು ಜ್ಞಾನದ ಹರಡುವುದು. 
  • ರಾಷ್ಟ್ರೀಯತೆ, ಜಾತ್ಯತೀತ ದೃಷ್ಟಿಕೋನ, ಮಾನವೀಯತೆ, ಸಮಗ್ರತೆ ಮತ್ತು ಸಾಮಾಜಿಕ ಕಾಳಜಿಯೊಂದಿಗಿನ ವೈಜ್ಞಾನಿಕ ಸ್ವಭಾವದ ವಾತಾವರಣವನ್ನು ಬೆಳೆಸುವ ವಿಶಿಷ್ಟ ಸಂಸ್ಥೆಯಾಗಿ ಮುಂದುವರೆಯುವುದು. 
  • ಜ್ಞಾನ, ಪ್ರೀತಿ, ಸಮಾಜಕ್ಕೆ ಗೌರವ ಮತ್ತು ತ್ಯಾಗದೊಂದಿಗೆ ದೇಶವನ್ನು ಮುನ್ನಡೆಸುವುದಕ್ಕಾಗಿ ಸಾರ್ವತ್ರಿಕ ಸಹೋದರತ್ವ ಮತ್ತು ಆದರ್ಶವಾದ ಮನುಷ್ಯತ್ವವನ್ನು ಸೃಷ್ಟಿಸುವುದು. 

* * * * * * * * * 

ಗುರಿಗಳು : 

  • ವಿದ್ಯಾರ್ಥಿಗಳಿಗೆ ಮೌಲ್ಯ ಆಧಾರಿತ ಶಿಕ್ಷಣ ನೀಡುವುದು. ಶೈಕ್ಷಣಿಕ ಅವಕಾಶಗಳನ್ನು ಸಮಾಜದ ಕೆಳವರ್ಗದವರಿಗೆತಲುಪಿಸುವುದು. 
  • ತಮ್ಮ ಸಮತೋಲನ ಬೆಳವಣಿಗೆಗೆ ಸಹ-ಪಠ್ಯ ಮತ್ತು ಹೆಚ್ಚುವರಿ ಪಠ್ಯಕ್ರಮದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆಮಾಡುವುದು. 
  • ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಮತ್ತು ಸಮಾಜದ ಯೋಗಕ್ಷೇಮಕ್ಕಾಗಿ ಜ್ಞಾನವನ್ನು ನಿರಂತರವಾಗಿ ಉತ್ಕೃಷ್ಟಗೊಳಿಸಲು ಶಿಕ್ಷಕರನ್ನು ಉತ್ತೇಜಿಸುವುದು. 
  • ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಸ್ಥಳೀಯ ಸಮುದಾಯದ ಸಾಮಾಜಿಕ ಅಭಿವೃದ್ಧಿಗೆ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವುದು. 
  • ಹೆಚ್ಚಿನ ಸಾಧನೆಗಾಗಿ ಆಸಕ್ತಿಯನ್ನು ಹೊಂದಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಮತ್ತು ಅವರ ಸೂಪ್ತ ಸಾಮರ್ಥ್ಯಗಳನ್ನು ಹೊರಹೊಮ್ಮಲು ಮತ್ತು ಅವರ ಗುರಿಗಳನ್ನು ತಲುಪುವಲ್ಲಿ ಅವರಿಗೆ ಸಹಾಯ ಮಾಡುವುದು. 

* * * * * * * * *